ಗುರುವಾರ, ಮೇ 22, 2008

ಕರ್ನಾಟಕ ರಾಜ್ಯವು ಇಂದು ಚುನಾವಣೆಯ ಬರಾಟೆಯಲ್ಲಿದೆ ಹಲವು ಪಕ್ಷಗಳು ಅಧಿಕಾರ ಹಿಡಿಯಲು ಹವನಿಸುತ್ತಿದ್ದು ಬಿ.ಜೆ.ಪಿ.ಯು ಅಧಿಕಾರ ಮಾಡುವವರು ನಾವೇ ಎಂದು ಅರ್ಬಟಿಸುತ್ತಿದೆ ಕೋಮುವಾದಿ ಅಜೆಂಡಾ ಇಟ್ಟುಕೊಂಡಿರುವ ಬಿ.ಜೆ.ಪಿ.ಯು ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಕರ್ನಾಟಕವನ್ನು ಗುಜರಾತ್ ಮಾಡುತ್ತವೆ. ಕರ್ನಾಟಕವನ್ನು ಮಾದರಿ ರಾಜ್ಯವಾಗಿ ಮಾಡುತ್ತವೆ. ಎಂದು ಬೊಬ್ಬೆ ಇಡುತ್ತಿದ್ದಾರೆ
ರಾಜ್ಯದಲ್ಲೆನಾದರು ಕೋಮುವಾದಿ ಪಕ್ಷವು ಅಧಿಕಾರ ಹಿಡಿದರೆ ರಾಜ್ಯದ ಜನತೆಯನ್ನು ಅದರಲ್ಲೂ ಬಡ ಜನತೆ, ಸಾಮಾನ್ಯ ರೈತ, ಕೂಲಿ ಕಾರ್ಮಿಕ, ಮದ್ಯಮ ವರ್ಗ, ಅಲ್ಪಸಂಖ್ಯಾತರು, ವಿದ್ಯಾರ್ಥಿ, ಯುವಜನತೆ, ಮಹಿಳೆಯರು ಸೇರಿದಂತೆ ರಾಜ್ಯದ ಜನ ವಿಭಾಗವು ಸಂಕಷ್ಟಕ್ಕೆ ಬಲಿಯಾಗಬೇಕಾದ ಪರಿಸ್ಥಿತಿ ಬರುತ್ತದೆ. ಇದರಲ್ಲಿ ಅಡಗಿರುವುದು ಕೇವಲ ಕೋಮುವಾದಿ ನೀತಿ ಮಾತ್ರವಲ್ಲ ಈ ದೇಶದ, ರಾಜ್ಯದ ಅರ್ಥಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕವಾಗಿ ಸಮಾಜದ ಮೂಲಭೂತ ಹಕ್ಕನ್ನು ಕಸಿಯುವ ಜನತೆಯಿಂದ ದೂರ ಮಾಡುವ ಪ್ರವೃತ್ತಿಗೆ ಮುಂದಾಗುತ್ತದೆ
ಕೋಮುವಾದಿ ಪಕ್ಷವು ದೇಶದಲ್ಲಿ ತನ್ನ ಹಿಂದುತ್ವದ ಅಜೆಂಡದ ಆಧಾರದಲ್ಲಿ ಈಗಾಗಲೇ ಗುಜರಾತ್ ನಲ್ಲಿ ಮುಸಲ್ಮಾನರ ಹತ್ಯೆ-ಗೊದ್ರಾ ಘಟನೆ ಸಾವಿರಾರು ಹಿಂದುಗಳು-ಅಲ್ಪಸಂಖ್ಯಾತರ ಮೇಲೆ ಹಲ್ಲೆ ನಡೆಸಿದೆ. ಸಾವಿರಾರು ರೈತರ ಆತ್ಮಹತ್ಯೆಗೆ ದುಡಿದ್ದು, ಬಾಬ್ರಿ ಮಸೀದಿ ಧ್ವಂಸ ಪ್ರಕರಣ, ಪ್ರಜಾಪ್ರಭುತ್ವದ ಉನ್ನತ ಅಂಗವಾದ ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಲಂಚಾ ಪ್ರಕರಣ, ಮತ್ತೊಬ್ಬ ಮಹಿಳೆಯನ್ನು ತನ್ನ ಹೆಂಡತಿಯಂದು ವಿದೇಶಕ್ಕೆ ಕರೆದುಕೊಂಡು ಹೋದ ಪ್ರಕರಣ, ಬಿ.ಜೆ.ಪಿ. ನೇತೃತ್ವದ ಸರ್ಕಾರದ ಅವಧಿಯಲ್ಲಿ ಶೆವ ಪೆಟ್ಟಿಗೆ ಹಗರಣ, ಹೂದ್ಕೋ ಹಗರಣ, ರಾಜ್ಯದಲ್ಲಿ-ಮಂಗಳೂರಿನಲ್ಲಿ, ಹುಬ್ಬಳ್ಳಿಯಲ್ಲಿ, ಕರಾವಳಿ ಪ್ರದೇಶದಲ್ಲಿ, ಬೆಂಗಳೂರಿನಲ್ಲಿ ಕೋಮುಗಲಭೆಯ ಪ್ರಕರಣ, ಕಳೆದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿನ ಜನವಿರೋಧಿ ನೀತಿಯನ್ನು ಅನುಸರಿಸಿರುವುದು, ಅಧಿಕಾರಕ್ಕಾಗಿ ಮತ್ತೊಂದು ಉರಿನಲ್ಲಿದ್ದವರು ಸಭೆಯ ಮಧ್ಯದಲ್ಲಿ ಓಡಿಬಂದ ಪ್ರಕರಣ ಇನ್ನು ಹಲವು ಪ್ರಕರಣವನ್ನು ನೆನಪಿಸಿಕೊಳ್ಳಬಹುದು.
ಭಾರತ ದೇಶವೂ ಹಲವು ಧರ್ಮದ, ಭಾಷೆಯ, ಜನಾಂಗದ ಸಮ್ಮಿಲನದ ಒಕ್ಕೂಟ ವ್ಯವಸ್ಥೆ ಇಲ್ಲಿ ಹಿಂದಿನಿಂದಲೂ ಒಟ್ಟಿಗೆ ಬಾಳ್ವೆ ನಡೆಸಿದ-ನಡೆಸುತ್ತಿರುವ ದೇಶವಾಗಿದೆ.
ಬಿ.ಜೆ.ಪಿ.ಯು ಹಿಂದುತ್ವದ ಪ್ಯಾಸಿಸ್ತ್ ಮಾದರಿಯಲ್ಲಿ ಇದ್ದು ಇ ಹಿಂದೆ ಜರ್ಮನಿಯಲ್ಲಿದ್ದ ಹಿಟ್ಲರ್ ತನ್ನ ಸ್ವಾರ್ಥಕ್ಕಾಗಿ ಜನಾಂಗ ಆಧಾರದಲ್ಲಿ ಲಕ್ಷಾಂತರ ಜನತೆಯ ಮಾರಣ ಹೋಮಕ್ಕೆ ಕಾರಣವಾಗಿ ಅಧಿಕಾರ ನಡೆಸಿದ ಅದೇ ಮಾದರಿಯಲ್ಲಿ ಕೋಮುವಾದಿ ಪಕ್ಷವು ಈ ದೇಶದ ಜನತೆಯಲ್ಲಿ ಕೋಮುವಾದಿ ವಿಷ ಬೀಜ ಬಿತ್ತಿ ಅಧಿಕಾರ ಹಿಡಿಯಲು ಅಜೆಂದವಾಗಿ ಬಳಸಿಕೊಂಡಿದೆ.
ಧರ್ಮವು ಜನತೆಯ ಒಂದು ಸಾಂಸ್ಕೃತಿಕ ಸಮಾಜದ ಒಂದು ಅಂಗ ಅದನ್ನು ಬೀದಿಗೆ ತಂದು ದೇವರ ಹೆಸಿರಿನಲ್ಲಿ ನಡೆದುಕೊಳ್ಳುತ್ತಿದೆ. ಪ್ಯಾಸಿಸ್ಟ್ ಮಾದರಿಯಲ್ಲಿ ನಡೆದು ಕೊಳ್ಳುತ್ತಿದೆ. ಹಿಟ್ಲರ್ ನನ್ನು ಸೋಲಿಸಿದ ಹಾಗೆ ಕೋಮುವಾದಿ ಶಕ್ತಿ ಸೋಲಿಸಬೇಕಾಗಿದೆ. ಜನತೆಯ ದೊಡ್ಡ ಪ್ರಮಾಣ ಹೋರಾಟವನ್ನು ಬೆಳೆಸಬೇಕಿದೆ. ತಮ್ಮ ಹಕ್ಕುಗಳನ್ನು ಉಳಿಸಿ